ದರ್ಶನ್ ಎಲ್ಲಾ ಹೊಸ ಹೀರೊಗಳಂತೆ ನೂರೆಂಟು ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲಿಯೇ ಯಶಸ್ಸಿನ ರುಚಿ ಕಂಡಿದ್ದರು. ಮೊದಲ ಸಿನಿಮಾದಲ್ಲೇ ಗೆದ್ದು ಬೀಗಿದ ದರ್ಶನ್ ಇಂದು ಅಭಿಮಾನಿಗಳ ಪಾಲಿಗೆ 'ಡಿ ಬಾಸ್' ಆಗಿ ಮಿಂಚಿದ್ದಾರೆ. ಇದೇ 'ಮೆಜೆಸ್ಟಿಕ್' ಸಿನಿಮಾ ಇಂದು 20 ವರ್ಷಗಳ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ದರ್ಶನ್ ಈ ಅಮೂಲ್ಯ ಕ್ಷಣಗಳನ್ನು ನೆನೆದಿದ್ದಾರೆ.
Challenging Star Darshan starrer Majestic celebrating 20 year of its release. Darshan shared this news in his twitter account for fans.