Surprise Me!

ಶಿಥಿಲಗೊಂಡಿದ್ದ ಓವರ್ ಹೆಡ್ ಟ್ಯಾಂಕ್ ಬಿದ್ದು ನೆಲಕಚ್ಚಿದ ವಿದ್ಯುತ್​ ಕಂಬಗಳು: ವಿಡಿಯೋ

2025-08-15 0 Dailymotion

ಚಿಕ್ಕಮಗಳೂರು: ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಶಿಥಿಲಾವಸ್ಥೆಗೆ ತಲುಪಿದ್ದ ಓವರ್ ಹೆಡ್ ಟ್ಯಾಂಕ್ ಬೀಳಿಸಿದ್ದರಿಂದ ಹಲವು ವಿದ್ಯುತ್​ ಕಂಬಗಳು ನೆಲಕಚ್ಚಿದ ಘಟನೆ ಅಜ್ಜಂಪುರ ಪಟ್ಟಣದ ಬುಕ್ಕಾಂಬುದಿ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಹಾಗೂ ಕಾರಿನಲ್ಲಿ ಹೋಗುತ್ತಿದ್ದವರು ಪಾರಾಗಿದ್ದಾರೆ.

ಪಟ್ಟಣ ಪಂಚಾಯಿತಿ ಸಿಬ್ಬಂದಿ ವತಿಯಿಂದ ಕಾರ್ಮಿಕರು ಟ್ಯಾಂಕ್ ತೆರವುಗೊಳಲಾಗುತ್ತಿತ್ತು. ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಟ್ಯಾಂಕನ್ನು​ ಬೀಳಿಸಿದ್ದರಿಂದ ಕಾರಿನ ಗಾಜು ಪುಡಿ ಪುಡಿಯಾಗಿದ್ದು, ಸ್ಥಳೀಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಓವರ್ ಹೆಡ್ ಟ್ಯಾಂಕ್ ಕುಸಿದ ಬಿದ್ದ ತಕ್ಷಣ ಸುತ್ತಮುತ್ತ ಇದ್ದ ಜನ ದಿಕ್ಕಪಾಲಾಗಿ ಓಡಿದ್ದಾರೆ. ಟ್ಯಾಂಕ್ ಅವಶೇಷಗಳು ಮತ್ತು ವಿದ್ಯುತ್​ ಕಂಬ ರಸ್ತೆ ಮೇಲೆ ಬಿದ್ದಿದ್ದರಿಂದ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಈ ವೇಳೆ ಸ್ಥಳೀಯರೇ ಟ್ರಾಫಿಕ್ ಕ್ಲಿಯರ್​ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್ ಕುಸಿದು ಬಿದ್ದು ಎರಡು ಮನೆಗಳಿಗೆ ಹಾನಿ(ದಾವಣಗೆರೆ): ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಓವರ್ ಹೆಡ್ ಟ್ಯಾಂಕ್ ಕುಸಿದು ಬಿದ್ದು ಎರಡು ಮನೆಗಳಿಗೆ ಹಾನಿಯಾದ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಮಡಿವಾಳರ ಬೀದಿಯಲ್ಲಿ ಇತ್ತೀಚೆಗೆ ನಡೆದಿತ್ತು.‌ ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ವೇಳೆ ಟ್ಯಾಂಕ್ ಬಿದ್ದಿದ್ದು, ಅನಾಹುತ ತಪ್ಪಿತ್ತು.

ಇದನ್ನೂ ಓದಿ: ಹಾವೇರಿ ವರದಾ ನದಿ ಸೇತುವೆಗೆ ಬಿದ್ದ ಟ್ರ್ಯಾಕ್ಟರ್: ಮೂವರ ರಕ್ಷಣೆ -Watch Video