Surprise Me!

ಹರಿದ್ವಾರದ ಜನವಸತಿ ಪ್ರದೇಶಕ್ಕೆ ಬಂದು ಜಾರಿಬಿದ್ದ ಆನೆ: ವಿಡಿಯೋ

2025-08-26 40 Dailymotion

ಹರಿದ್ವಾರ (ಉತ್ತರಾಖಂಡ): ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದು ನಿಲ್ಲುತ್ತಿಲ್ಲ. ಕೆಲವೊಮ್ಮೆ ಚಿರತೆಗಳು, ಕೆಲವೊಮ್ಮೆ ಕರಡಿಗಳು, ಕೆಲವೊಮ್ಮೆ ಮೊಸಳೆಗಳು ಮತ್ತು ಇನ್ನು ಕೆಲವೊಮ್ಮೆ ಆನೆಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ. ಹೀಗೆಯೇ, ಇಂದು (ಮಂಗಳವಾರ) ಕಂಖಾಲ್ ಪೊಲೀಸ್ ಠಾಣೆ ಪ್ರದೇಶದ ಜಗದೀಶಪುರ ಪ್ರದೇಶದಲ್ಲಿ ಆನೆಗಳ ಹಿಂಡು ಜನವಸತಿ ಪ್ರದೇಶಕ್ಕೆ ಪ್ರವೇಶಿಸಿದ್ದು, ಅದರಲ್ಲೊಂದು ಆನೆ ನಿಯಂತ್ರಣ ತಪ್ಪಿ ಜಾರಿ ಬಿದ್ದಿದೆ.

ಹರಿದ್ವಾರ ಕಾಲೋನಿಗೆ ನುಗ್ಗಿದ ಆನೆ : ವಾಸ್ತವವಾಗಿ ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ಜನರ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ಜನರು ರಸ್ತೆಗಳಲ್ಲಿ ನಡೆಯಲೂ ಕಷ್ಟವಾಗುತ್ತಿದೆ. ಇದೇ ರೀತಿ ಕಾಡು ಪ್ರಾಣಿಗಳು ಸಹ ರಸ್ತೆಯಲ್ಲಿ ನಡೆಯಲು ತೊಂದರೆ ಅನುಭವಿಸುತ್ತಿವೆ. ಹೀಗೆ ಇಂದು ಜನವಸತಿ ಪ್ರದೇಶಕ್ಕೆ ಬಂದ ಕಾಡಾನೆಯೊಂದು ಜಾರಿ ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಈ ಕುರಿತು ರೇಂಜ್ ಆಫೀಸರ್ ಶೈಲೇಂದ್ರ ಸಿಂಗ್ ನೇಗಿ ಅವರು ಮಾತನಾಡಿ, 'ಇಂದು ಅರಣ್ಯ ಇಲಾಖೆಗೆ ಆನೆಗಳು ಕಾಡಿನಿಂದ ನಗರದ ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ನಂತರ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಿತು. ಆನೆಗಳ ಹಿಂಡನ್ನು ಕಾಡಿನ ಕಡೆಗೆ ಕಳುಹಿಸಲಾಯಿತು. ಏತನ್ಮಧ್ಯೆ, ಸ್ಥಳೀಯ ನಿವಾಸಿಯೊಬ್ಬರು ಮಾಡಿದ ಈ ವಿಡಿಯೋದಲ್ಲಿ ಆನೆ ಜಾರಿಬಿದ್ದಿರುವುದು ಕಾಣುತ್ತಿದೆ' ಎಂದಿದ್ದಾರೆ.

ಹರಿದ್ವಾರದ ಹೆಚ್ಚಿನ ಪ್ರದೇಶವು ಅರಣ್ಯಕ್ಕೆ ಸಂಪರ್ಕ ಹೊಂದಿರುವುದರಿಂದ ನಗರ ಪ್ರದೇಶದಲ್ಲಿ ಪ್ರತಿದಿನ ಕಾಡು ಪ್ರಾಣಿಗಳನ್ನು ಕಾಣಬಹುದು. ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುವುದನ್ನು ತಡೆಯಲು ಅರಣ್ಯ ಇಲಾಖೆ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ. ಅರಣ್ಯ ಇಲಾಖೆಯಿಂದ 24 ಗಂಟೆಗಳೂ ಲಭ್ಯವಿರುವ ತ್ವರಿತ ಪ್ರತಿಕ್ರಿಯೆ ತಂಡವನ್ನು ಸಹ ನಿಯೋಜಿಸಲಾಗಿದೆ.

ಇದನ್ನೂ ಓದಿ : ಆಯತಪ್ಪಿ ಗುಂಡಿಗೆ ಬಿದ್ದ ಕಾಡಾನೆ: ಒದ್ದಾಟದ ನಂತರ ಮತ್ತೆ ಮೇಲೆದ್ದು ಓಡಿತು- ವಿಡಿಯೋ - ELEPHANT FALLS INTO A PIT