ಶಿರಸಿ(ಉತ್ತರ ಕನ್ನಡ): ಪಕ್ಷ ಬದಲಾದರೂ ಸಭಾಪತಿಯನ್ನು ಕೆಲವೇ ಸಂದರ್ಭದಲ್ಲಿ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್ ಅಂತಹ ಇತಿಹಾಸ ನಿರ್ಮಾಣ ಮಾಡುವುದಾದರೆ ಮಾಡಲಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಜನ್ಮ ಶತಮಾನೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ಗೆ ಬಹುಮತ ಬಂದರೂ ನಾನು ಅಧಿಕಾರಕ್ಕೆ ಅಂಟಿಕೊಂಡ ವ್ಯಕ್ತಿಯಲ್ಲ. ಒಂದು ವರ್ಷ ಸಭಾಪತಿ ಆದರೂ ಮಾಜಿ ಸಭಾಪತಿ ಅಥವಾ ಹತ್ತು ವರ್ಷ ಮಾಡಿದರೂ ಮಾಜಿ ಎನ್ನುತ್ತಾರೆ. ಹೀಗಾಗಿ ಸಭಾಪತಿ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆದಾಗ ತಕ್ಷಣ ರಾಜೀನಾಮೆ ನೀಡುತ್ತೇನೆ. ಹಿಂದೆ ಉಗ್ರಪ್ಪ ಹಾಗೂ ಶಂಕರಮೂರ್ತಿ ಅವರನ್ನು ಮಾತ್ರ ಪಕ್ಷ ಬದಲಾದಾಗ ಅಧಿಕಾರದಿಂದ ಇಳಿಸಲಾಗಿತ್ತು. ಈಗ ಕಾಂಗ್ರೆಸ್ ಅಂತಹ ಕೆಲಸ ಮಾಡಿದಲ್ಲಿ ಇತಿಹಾಸ ನಿರ್ಮಿಸಿದಂತಾಗಲಿದೆ ಎಂದರು.
ಇಂದು ಪರಿಷತ್ನಲ್ಲಿ ಮಾತ್ರವಲ್ಲದೇ ಎಲ್ಲಿಯೂ ಮೌಲ್ಯ ಉಳಿದಿಲ್ಲ. ಅವೆಲ್ಲವೂ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಮುಗಿದಿದೆ. ದುಡ್ಡು ತೆಗೆದುಕೊಂಡು ಮತ ಹಾಕುವುದು, ದುಡ್ಡು ಕೊಟ್ಟು ಮತ ಪಡೆಯುವುದು ಮಾತ್ರ ನಡೆಯುತ್ತಿದೆ. ಮೌಲ್ಯ ಯಾರಾದರೂ ಉಳಿಸಿದಲ್ಲಿ ಅದು ಮಾಧ್ಯಮದಿಂದ ಮಾತ್ರ ಸಾಧ್ಯವಿದೆ. ನಾವೂ ಸಹ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ; ಹೀಗಾಗಿ ಸುಗಮವಾಗಿ ಅಧಿವೇಶನ ನಡೆಸಲು ಬಿಡಲಿಲ್ಲ- ಪ್ರಲ್ಹಾದ್ ಜೋಶಿ