ಗುರುಗ್ರಾಮ: ದೆಹಲಿ-ಎನ್ಸಿಆರ್ನಲ್ಲಿ ಸೋಮವಾರ ಬೆಳಗ್ಗೆಯಿಂದ ಆರಂಭವಾದ ಮಳೆಗೆ, ಗುರುಗ್ರಾಮ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ನಿರಂತರ ಮಳೆಯಿಂದಾಗಿ ಮಧ್ಯಾಹ್ನದ ಹೊತ್ತಿಗೆ ಇಡೀ ನಗರವೇ ಸ್ಥಗಿತಗೊಂಡಿತ್ತು.
ಇಪ್ಕೊ ಚೌಕ್, ದೆಹಲಿ- ಜೈಪುರ ಹೆದ್ದಾರಿ ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ನೂರಾರು ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡವು. 30 ನಿಮಿಷಗಳಲ್ಲಿ ಗಮ್ಯ ಸ್ಥಳಗಳನ್ನು ತಲುಪುವವರು ಟ್ರಾಫಿಕ್ನಿಂದಾಗಿ ತಮ್ಮ ಸ್ಥಳಕ್ಕೆ ತಲುಪಲು 3 ರಿಂದ 4 ಗಂಟೆಗಳನ್ನು ತೆಗೆದುಕೊಂಡರು. ದೆಹಲಿ- ಜೈಪುರ ಎಕ್ಸ್ಪ್ರೆಸ್ ವೇ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಅಲ್ಲಿ ಸುಮಾರು 10 ಕಿ.ಮೀಗಿಂತಲೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಾಲ್ಕು ಅಡಿ ನೀರು, ರಸ್ತೆಗಳಲ್ಲಿ ನಿಂತ ವಾಹನಗಳು: ಗುರುಗ್ರಾಮದ ರಸ್ತೆಗಳಲ್ಲಿ ನೀರು ತುಂಬಿ ಹರಯುತ್ತಿದ್ದು, ಕೆಲವು ಸ್ಥಳಗಳಲ್ಲಿ 4 ಅಡಿಗಳಷ್ಟು ನೀರು ನಿಂತಿತ್ತು. ಟ್ರಾಫಿಕ್ ಜಾಮ್ನಿಂದಾಗಿ ವಾಹನಗಳ ರಸ್ತೆ ಉದ್ದಕ್ಕೂ ನಿಂತಿದ್ದು, ತುಂಬಾ ನಿಧಾನಕ್ಕೆ ಮುಂದಕ್ಕೆ ಹೋಗುತ್ತಿದ್ದವು. ಇಪ್ಕೊ ಚೌಕ್‌ನಲ್ಲಿನ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ದೆಹಲಿ-ಜೈಪುರ ಹೆದ್ದಾರಿ ಸ್ಥಗಿತಗೊಂಡಿತ್ತು. ಪ್ರತಿ ಸೋಮವಾರದಂತೆ ಈ ಬಾರಿಯೂ ಕಚೇರಿಗೆ ಹೋಗುವವರು ಬೇಗ ಕಚೇರಿ ತಲುಪುವ ಉದ್ದೇಶದಲ್ಲಿ ರಸ್ತೆಗಿಳಿದರೆ, ಭಾರಿ ಮಳೆಯಿಂದಾಗಿ ಅದು ಹಾಳಾಗಿತ್ತು. ಜನರು ತಮ್ಮ ಮನೆಗಳನ್ನು ತೊರೆದಾಗಿತ್ತು, ಆದರೆ ಸರಿಯಾದ ಸಮಯಕ್ಕೆ ಕಚೇರಿ ತಲುಪುವುದು ಮಾತ್ರ ಸಾಧ್ಯವಾಗಲಿಲ್ಲ.
ಪರಿಸ್ಥಿತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಅಜಯ್ ಕುಮಾರ್ ತಕ್ಷಣವೇ ಶಾಲೆಗಳು ಹಾಗೂ ಕಂಪನಿಗಳಿಗೆ ಆನ್ಲೈನ್ ಮೋಡ್ ಅಳವಡಿಸಿಕೊಳ್ಳಿ, ಹೊರಗೆ ಹೋಗುವುದು ಅಪಾಯಕಾರಿ ಎಂದು ಸಲಹೆ ನೀಡಿದರು. ಹವಾಮಾನ ಇಲಾಖೆಯ ಪ್ರಕಾರ ಸೋಮವಾರ ಮಧ್ಯಾಹ್ನ 3 ರಿಂದ ಸಂಜೆ 7ರವರೆಗೆ 100 ಮಿ.ಮೀಗಿಂತ ಹೆಚ್ಚು ಮಳೆ ದಾಖಲಾಗಿದೆ. ಇಂದು ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ನೋಡಿ: ಭಾರಿ ಮಳೆಯಿಂದ ಹಿಮಾಚಲ ಪ್ರದೇಶದಲ್ಲಿ 16 ಭಕ್ತರು ಸಾವು: ಸಾವಿರಾರು ಜನರ ರಕ್ಷಣೆ