Surprise Me!

ನೋಯ್ಡಾದ ಕಾರು ಸರ್ವೀಸ್​​​ ಸೆಂಟರ್‌ನಲ್ಲಿ ಬೆಂಕಿ: ಕಾರುಗಳು ಭಸ್ಮ

2025-09-03 7 Dailymotion

ನೋಯ್ಡಾ(ದೆಹಲಿ): ದೆಹಲಿ ಸಮೀಪದ ನೋಯ್ಡಾದ ಸೆಕ್ಟರ್​​ 63ರ ಕಾರು ಸರ್ವೀಸ್​​​ ಸೆಂಟರ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಏಳರಿಂದ ಎಂಟು ಕಾರುಗಳು ಸುಟ್ಟು ಕರಕಲಾಗಿವೆ. 

ಸೆಂಟರ್​ನ ಉದ್ಯೋಗಿಗಳು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಎರಡು ಗಂಟೆಗಳ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಆದರೆ, 7 ರಿಂದ 8 ಕಾರುಗಳು ಸುಟ್ಟು ಕರಕಲಾಗಿವೆ. ಸರ್ವೀಸ್​​​​ ಸೆಂಟರ್​ನ ಮೊದಲ ಮಹಡಿಯ ಕಚೇರಿ ಸಹ ಸುಟ್ಟು ಹೋಗಿದೆ. ಬೆಂಕಿಯ ಜ್ವಾಲೆಗಳು ಮೊದಲ ಮಹಡಿಯಿಂದ ಎರಡನೇ ಮಹಡಿಯವರೆಗೂ ವ್ಯಾಪಿಸಿದ್ದವು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಸಿಎಫ್‌ಒ ಪ್ರದೀಪ್ ಕುಮಾರ್ ಚೌಬೆ ಈ ಬಗ್ಗೆ ಮಾತನಾಡಿ, "ಮಧ್ಯಾಹ್ನ 1.45ರ ಸುಮಾರಿಗೆ ನಮಗೆ ಮಾಹಿತಿ ಸಿಕ್ಕಿತು. ತಕ್ಷಣವೇ ವಿವಿಧ ಅಗ್ನಿಶಾಮಕ ಠಾಣೆಗಳಿಂದ ಎಂಟು ವಾಹನಗಳನ್ನು ಇಲ್ಲಿಗೆ ಕಳುಹಿಸಲಾಯಿತು. ಕಾರುಗಳು ಉರಿಯುತ್ತಿರುವುದು ಕಂಡು ಬಂದಿತು. ಬೆಂಕಿಯು ಮೊದಲ ಮತ್ತು ಎರಡನೇ ಮಹಡಿಗಳಿಗೂ ವ್ಯಾಪಿಸಿತ್ತು. ನಮ್ಮ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯವನ್ನು ಪ್ರಾರಂಭಿಸಿದರು. ಒಟ್ಟು ಏಳರಿಂದ ಎಂಟು ಕಾರುಗಳು ಸುಟ್ಟುಹೋಗಿವೆ ಮತ್ತು ಮೊದಲ ಮಹಡಿಯ ಕಚೇರಿಯೂ ಸಹ ಭಸ್ಮವಾಗಿದೆ. ಈ ದುರಂತದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡ ಕಾರಣಗಳು ಮತ್ತು ನಷ್ಟದ ಅಂದಾಜನ್ನು ಮಾಡಲಾಗುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಹಳ್ಳಕ್ಕೆ ಬಿದ್ದ ಬಸ್, ಅದೃಷ್ಟವಶಾತ್ ತಪ್ಪಿದ ಅನಾಹುತ: ವಿಡಿಯೋ