ಶಿವಮೊಗ್ಗ: ರಾಜ್ಯದ ಭೂಗತ ವಿದ್ಯುತ್ ಉತ್ಪಾದನ ಕೇಂದ್ರವಾದ ಮಾಣಿ ಡ್ಯಾಂನಿಂದ 2,500 ಕ್ಯೂಸೆಕ್ ನೀರನ್ನು ವರಾಹಿ ನದಿಗೆ ಬುಧವಾರ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಾಸ್ತಿಕಟ್ಟೆಯ ಮಾನಿಬೈಲು ಗ್ರಾಮದ ಬಳಿ ಮಾಣಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇದು ವರಾಹಿ ನದಿಗೆ ನಿರ್ಮಿಸಲಾದ ಅಣೆಕಟ್ಟು ಆಗಿದ್ದು, ಇದರ ಎತ್ತರ 590 ಮೀಟರ್ ಆಗಿದೆ. ಇದು ತನ್ನ ಗರಿಷ್ಠ ಮಟ್ಟ ತಲುಪಿದ್ದರಿಂದ ಇಂದು ಮೂರು ಗೇಟುಗಳ ಮೂಲಕ ನದಿಗೆ 2,500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಈ ಜಲಾಶಯಕ್ಕೆ ಸಾರ್ವಜನಿಕರಿಗೆ ನಿಷೇಧವಿದೆ. ಇದನ್ನು ವಿದ್ಯುತ್ ಉತ್ಪಾದನೆಗಾಗಿಯೇ 1988ರಲ್ಲಿ ನಿರ್ಮಿಸಲಾಗಿದೆ. ಅಣೆಕಟ್ಟೆ ಬಳಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದೇ ನೀರು ಭೂಗತ ವಿದ್ಯುತ್ ಉತ್ಪಾದನಾ ಘಟಕ್ಕೆ ಹೋಗುತ್ತದೆ. ಇಲ್ಲಿಂದ ಬಿಡುಗಡೆಯಾದ ನೀರು ಲಿಂಗನಮಕ್ಕಿ ಜಲಾಶಯಕ್ಕೆ ಹೋಗಿ ಸೇರುತ್ತದೆ. ಅಣೆಕಟ್ಟು ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದರ ಹಿನ್ನೀರು ಉಡುಪಿ ಜಿಲ್ಲೆಗೆ ಸೇರುತ್ತದೆ.
ಬಾಗಿನ ನೀಡಿ ಗೇಟ್ ತೆರೆದ ಅಧಿಕಾರಿಗಳು: ತುಂಬಿದ ಮಾಣಿ ಡ್ಯಾಂಗೆ ಮಾಣಿ ಡ್ಯಾಂನ ಅಧಿಕಾರಿಗಳು ಬುಧವಾರ ಬಾಗಿನ ಅರ್ಪಿಸಿ ಗೇಟ್ ತೆರೆದರು.
ಇದನ್ನೂ ಓದಿ: ಟಿಬಿ ಡ್ಯಾಂ ಎಲ್ಲಾ ಗೇಟ್ಗಳನ್ನು ಬದಲಾಯಿಸಲು 48 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ: ಸಚಿವ ಎನ್. ಎಸ್. ಬೋಸರಾಜು