Surprise Me!

ಮತ್ತೆ ಫೀಲ್ಡ್​​ಗಿಳಿದ ಒಂಟಿ ಸಲಗ: ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್

2025-09-04 15 Dailymotion

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೋಲ್​ ಕಾಲ್ ರಾಜ ಫೀಲ್ಡ್​ಗೆ ಇಳಿದು ವಾಹನ ಸವಾರರನ್ನು ಗಲಿಬಿಲಿಗೊಳಿಸಿದ್ದಾನೆ‌. ಗೂಡ್ಸ್ ವಾಹನದ ಚಾಲಕರು ಹಫ್ತಾ ಕೊಡದೇ ಇದ್ದರೆ ಜಪ್ಪಯ್ಯ ಅಂದರೂ ಈತ ಬಿಡುವುದೇ ಇಲ್ಲ. ಬಾಳೆ, ತರಕಾರಿ, ಕಬ್ಬಿನ ವಾಹನಗಳೇ ಈತನ ಟಾರ್ಗೆಟ್ ಆಗಿದ್ದು, ಪ್ರತಿಯೊಂದು ಗೂಡ್ಸ್​ ವಾಹನವನ್ನು ಪಿನ್​ ಟು ಪಿನ್ ಚೆಕ್ ಮಾಡಿದ ಬಳಿಕವಷ್ಟೇ ಹೊರಡಲು ಬಿಡುತ್ತಿದ್ದಾನೆ.

ಅರಣ್ಯ ಸಿಬ್ಬಂದಿಗೂ ಡೋಂಟ್​ ಕೇರ್​, ಪಟಾಕಿ ಸಿಡಿಸಿದರೂ ನೋ ಯ್ಯೂಸ್​ ಎಂಬಂತೆ ಬಂಡೀಪುರದಲ್ಲಿ ಆಗಾಗ ಕಾಡಿನಿಂದ ನಾಡಿಗೆ ಬಂದು ತರಕಾರಿ, ಕಬ್ಬು, ಬಾಳೆಹಣ್ಣಿನ ವಾಹನ ದರೋಡೆ ಮಾಡುತ್ತಿರುವ ಈ ಒಂಟಿ ಸಲಗನ ಉಟಪಳಕ್ಕೆ ವಾಹನ ಸವಾರರು ರೋಸಿ ಹೋಗಿದ್ದಾರೆ. 

ಒಂಟಿ ಸಲಗನ ಹಾವಳಿಗೆ ನಲುಗಿಹೋಗಿರುವ ಗೂಡ್ಸ್ ವಾಹನ ಚಾಲಕರು, ಲಾರಿಗೆ ಟಾರ್ಪಲ್ ಹಾಕಿದರೂ‌ ಬಿಡದೇ ಟಾರ್ಪಾಲನ್ನೇ ತೆಗೆಯಲು ಪ್ರಯತ್ನಿಸುತ್ತಿದೆ. ಅದರಂತೆ, ಬುಧವಾರ (ಸೆ. 3) ಕೂಡ ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜ ಕಿರಿಕ್​​ ಮಾಡುವ ದೃಶ್ಯ ಮೊಬೈಲ್​​​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬಂಡೀಪುರದಲ್ಲಿ ರಸ್ತೆಗಿಳಿದ ಕಾಡಾನೆ; ಭಯದಲ್ಲಿ ಕಿರುಚಿದ ಪ್ರವಾಸಿಗರು