Surprise Me!

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಗಣೇಶನಿಗೆ ಅದ್ಧೂರಿ ಮೆರವಣಿಗೆ: ಕೈಕೈ ಹಿಡಿದು ಕುಣಿದು ಕುಪ್ಪಳಿಸಿ ಗಣಪನ ನಿಮಜ್ಜನ

2025-09-05 15 Dailymotion

ಕಾರವಾರ(ಉತ್ತರ ಕನ್ನಡ): ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಕಾರವಾರ ನಗರದ ಕೋಣೆವಾಡದ ಗಣೇಶನ ಮೂರ್ತಿಯನ್ನು ಗುರುವಾರ ಬೃಹತ್ ಮೆರವಣಿಗೆ ಮೂಲಕ ನಿಮಜ್ಜನ ಮಾಡಲಾಯಿತು. 

ಸಂಜೆಯ ವೇಳೆಗೆ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಟ್ಟಾಗಿ ಗಣಪತಿ ಮೆರವಣಿಗೆಯನ್ನು ಸಜ್ಜುಗೊಳಿಸಿದರು. ಕೋಣೆವಾಡದ ಎಲ್ಲಾ ಸಮುದಾಯದ ಯುವಕರು, ಯುವತಿಯರು ಒಂದೇ ಬಣ್ಣದ ವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಣ್ಣ, ಬಣ್ಣದ ವಿದ್ಯುತ್​​ ದೀಪಾಲಂಕಾರ ಹಾಗೂ ಧ್ವನಿವರ್ಧಕದ ಮೂಲಕ ಮೆರವಣಿಗೆಯು ಸಾಗಿತು.

ದಾರಿಯುದ್ದಕ್ಕೂ ಹಿಂದೂ ಹಾಗೂ ಮುಸ್ಲಿಂ ಯುವಕರು ಕೈ-ಕೈ ಹಿಡಿದುಕೊಂಡು ಹಾಡಿಗೆ ಹೆಜ್ಜೆ ಹಾಕಿದರು. ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಗೆ ಸಣ್ಣ ಮಳೆಯು ಅಡ್ಡಿಯಾದರೂ ಸಾಂಗವಾಗಿ ಸಾಗಿತು. ಬಳಿಕ ಟ್ಯಾಗೋರ್​​​ ಕಡಲ ತೀರದಲ್ಲಿ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ, ನಿಮಜ್ಜನ ನೆರವೇರಿಸಲಾಯಿತು.

ಈ ಬಾರಿ 25ನೇ ವರ್ಷದ ಗಣೇಶ ಮೂರ್ತಿಯನ್ನು ನಗರದ ಕೋಣೆವಾಡದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಮುಸ್ಲಿಂ ಸಮುದಾಯದವರೇ ಆಗಿದ್ದು, ಈ ಸಲವೂ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆ ಮೆರೆದರು.

ಇದನ್ನೂ ಓದಿ: ವಿನಾಯಕನ ಬರಮಾಡಿಕೊಳ್ಳುವ ಮುಸ್ಲಿಮರು, ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂಗಳು