ಪುಣೆ (ಮಹಾರಾಷ್ಟ್ರ): ಗಣಪತಿ ಬಪ್ಪಾ ಮೋರ್ಯ.. ಮಂಗಲ್ ಮೂರ್ತಿ ಮೋರ್ಯ.. ಮೋರ್ಯ ಮೋರ್ಯ ಎಂಬ ಘೋಷಣೆಗಳೊಂದಿಗೆ ಪ್ರೀತಿಯ ಗಣಪತಿಗೆ ಭಕ್ತರು ಪುಣೆಯಲ್ಲಿ ಈ ಬಾರಿಯ ಗಣೇಶ ಚತುರ್ಥಿಗೆ ವಿದಾಯ ಹೇಳಿದರು.
ಉಪಮುಖ್ಯಮಂತ್ರಿ ಅಜಿತ್ ಪವಾರ್, ಕೇಂದ್ರ ಸಚಿವ ಮುರಳೀಧರ್ ಮೊಹೋಲ್, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್ ಮತ್ತು ರಾಜ್ಯ ಸಚಿವೆ ಮಾಧುರಿ ಮಿಸಾಲ್ ಅವರ ಆರತಿಯೊಂದಿಗೆ ಪುಣೆಯ ನಿಮಜ್ಜನ ಮೆರವಣಿಗೆ ಶನಿವಾರ (ಸೆ. 6) ಬೆಳಗ್ಗೆ 9:30 ಕ್ಕೆ ಪ್ರಾರಂಭವಾಯಿತು.
ಪುಣೆಯ ನಿಮಜ್ಜನ ಮೆರವಣಿಗೆ ನಾಸಿಕ್ ಡ್ರಮ್‌ಗಳ ಶಬ್ಧದೊಂದಿಗೆ ಹೆಚ್ಚಿನ ಸಂಖ್ಯೆಯ ಪುಣೇಕರರ ಸಮ್ಮುಖದಲ್ಲಿ ಮೋರ್ಯ ಮೋರ್ಯ ಘೋಷಣೆಗಳೊಂದಿಗೆ ಪ್ರಾರಂಭವಾಗಿದೆ. ಈ ಗಣಪತಿ ನಿಮಜ್ಜನದ ಮೆರವಣಿಗೆಯ ಡ್ರೋನ್ ವಿಡಿಯೋವನ್ನು ನಾವಿಂದು ನೋಡೋಣ.
₹2.32 ಕೋಟಿಗೆ ಗಣಪತಿ ಲಡ್ಡು ಮಾರಾಟ (ಹೈದರಾಬಾದ್) : ಬಂಡ್ಲಗುಡ ಜಾಗೀರ್‌ನ ಕೀರ್ತಿ ರಿಚ್‌ಮಂಡ್ ವಿಲ್ಲಾಸ್‌ನಲ್ಲಿ ಶುಕ್ರವಾರ ನಡೆದ ವಿನಾಯಕನ ಲಡ್ಡು ಹರಾಜಿನಲ್ಲಿ ದಾಖಲೆಯ ₹2,31,95,000 ಬೆಲೆಗೆ ಮಾರಾಟವಾಯಿತು. ಕಳೆದ ವರ್ಷ, ₹1.87 ಕೋಟಿಗೆ ಲಡ್ಡು ಬಿಕರಿಯಾಗಿತ್ತು.
ದೇಶದಲ್ಲಿಯೇ ಅತಿ ಹೆಚ್ಚು ಗಣೇಶ ಮೂರ್ತಿಗಳ ನಿಮಜ್ಜನ ಹೈದರಾಬಾದ್ನಲ್ಲಿ ನಡೆಯುತ್ತದೆ. ಶುಕ್ರವಾರದಿಂದ ಪ್ರಾರಂಭವಾಗಿರುವ ಗಣಪತಿ ನಿಮಜ್ಜನವು ಸುಮಾರು 40 ಗಂಟೆಗಳ ಕಾಲ ನಡೆಯುತ್ತದೆ. ಇಲ್ಲಿನ ಹುಸೇನ್ ಸಾಗರ್‌ನಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ವಿಗ್ರಹಗಳನ್ನು ನಿಮಜ್ಜನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ : ಹಿಂದೂ-ಮುಸ್ಲಿಂ ಭಾವೈಕ್ಯತೆಯ ಗಣೇಶನಿಗೆ ಅದ್ಧೂರಿ ಮೆರವಣಿಗೆ: ಕೈಕೈ ಹಿಡಿದು ಕುಣಿದು ಕುಪ್ಪಳಿಸಿ ಗಣಪನ ನಿಮಜ್ಜನ - GANESH NIMAJJANAM VIDEO