Surprise Me!

ಕಾರವಾರ: ಸಾರ್ವಜನಿಕ ಗಣೇಶ ಮೂರ್ತಿಗಳ ಅದ್ಧೂರಿ ನಿಮಜ್ಜನ ಮೆರವಣಿಗೆ

2025-09-07 3 Dailymotion

ಕಾರವಾರ: ನಗರದ ವಿವಿಧೆಡೆ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ಧ ಸಾರ್ವಜನಿಕ ಗಣಪತಿಗಳನ್ನು ಶನಿವಾರ ಅದ್ಧೂರಿ ಮೆರವಣಿಗೆಯೊಂದಿಗೆ ಅರಬ್ಬಿ ಸಮುದ್ರದಲ್ಲಿ ನಿಮಜ್ಜನ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.

ಗಣೇಶ ಚತುರ್ಥಿಯಂದು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳಿಂದ ಪ್ರತಿಷ್ಠಾಪಿಸಿದ್ದ ಗಣೇಶನಿಗೆ 11 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ಮಧ್ಯಾಹ್ನದ ವೇಳೆಗೆ ಎಲ್ಲ ಗಣಪತಿಗಳ ವಿಸರ್ಜನಾ ಮೆರವಣಿಗೆಗೆ ಸಿದ್ದತೆ ನಡೆಸಲಾಗಿತ್ತು.

ನಗರದ ಮಾರುತಿ ಗಲ್ಲಿಯ ಗಣಪತಿ, ಬೃಹತ್ ಡಿಜೆ ಸದ್ದಿನೊಂದಿಗೆ ಸುಭಾಸ್ ಸರ್ಕಲ್ ಬಳಿ ಆಟೋ ರಿಕ್ಷಾ ಮತ್ತು ಮಾಲಕರ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ ಗಣೇಶ, ಕೋಡಿಭಾಗದ ಗಣೇಶನ ಮೂರ್ತಿ, ಸುಂಕೇರಿ ಸೇರಿದಂತೆ ಹಲವು ಬೃಹತ್ ಸಾರ್ವಜನಿಕ ಗಣಪತಿಗಳ ಮೆರವಣಿಗೆ ನಡೆಯಿತು. ವಿವಿಧ ಮಹಾಭಾರತದ ಸನ್ನಿವೇಶದಲ್ಲಿ ದುರ್ಯೋಧನ ಹಾಗೂ ಶಕುನಿ ಮೋಸದ ಜೂಜಾಟದ ಹಗರಣದ ಪ್ರದರ್ಶನ ಸೇರಿದಂತೆ ವಿವಿಧ ಹಗರಣಗಳ ಪ್ರದರ್ಶನವು ಗಮನ ಸೆಳೆಯಿತು.

ಸಾಂಪ್ರದಾಯಿಕ ವಿಶೇಷ ವಾದ್ಯಗಳೊಂದಿಗೆ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಾಗುವ ರಸ್ತೆಯ ಉದ್ದಗಲಕ್ಕೂ ಸಹಸ್ರಾರು ಸಂಖ್ಯೆಯ ಭಕ್ತರು ನೆರೆದಿದ್ದರು. ಮಹಿಳೆಯರು ಕೂಡ ಗಣೇಶನ ಮುಂದೆ ಸಾಂಪ್ರದಾಯಿಕ ಉಡುಗೆ ತೊಟ್ಟು ಚೆಂಡೆ, ವಾದ್ಯ ಮೇಳಗಳಿಗೆ ಹೆಜ್ಜೆ ಹಾಕಿದರು. ಭಜನೆ, ಸಂಗೀತ ಕಾರ್ಯಕ್ರಮಗಳ ಮೂಲಕ ಗಜಾನನನಿಗೆ ವಂದಿಸಿದರು.

ಇದನ್ನೂ ಓದಿ: ಅದ್ಧೂರಿಯಾಗಿ ನಡೆದ ಪುಣೆ ಗಣೇಶೋತ್ಸವ ನಿಮಜ್ಜನದ ಮೆರವಣಿಗೆ - Video